Open Counseling Under ICAR Quota(2024-25)
Open Counseling in Farm Universites Under ICAR Quota(2024-25)
ADMIN
Home
Instructions
Login
@ Instructions
CANDIDATES READ INSTRUCTIONS CAREFULLY
ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯಗಳ ಸ್ನಾತಕ ಪದವಿಗಳಿಗೆ ನಡೆಸಿದ CUET (ICAR) UG-2024 ಪರೀಕ್ಷೆಗಳನ್ನು ಬರೆದು ರ್ಯಾಂಕ್ ಪಡೆದ ಕರ್ನಾಟಕದ ಅಭ್ಯರ್ಥಿಗಳು ಮಾತ್ರ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರುತ್ತಾರೆ:
1.CUET (ICAR) ಕೋಟಾದಡಿ ಭಾಗವಹಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ CUET (ICAR) ನಡೆಸುವ ಪ್ರವೇಶಾತಿ ಪರೀಕ್ಷೆ ಬರೆದಿದ್ದು Iಅಂಖ ನೀಡಿದ ರ್ಯಾಂಕ್ ಪಟ್ಟಿ ಹಾಗೂ ರಿಜಿಸ್ಟ್ರೇಷನ್‍ಗೆ ಅರ್ಹರಾಗಿರುವ ಪ್ರತಿಯನ್ನು ಕಡ್ಡಾಯವಾಗಿ ಹೊಂದಿರಬೇಕು.
2. ಸೀಟ್‍ಮ್ಯಾಟ್ರಿಕ್ಸ್‍ನಲ್ಲಿ ಪ್ರಕಟಿಸಿರುವ ಪ್ರವರ್ಗದಡಿಗಳಲ್ಲಿ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಸೀಟುಗಳನ್ನು ನಿಯಮಾನುಸಾರ ಸಾಮಾನ್ಯ ವರ್ಗಕ್ಕೆ ಪರಿವರ್ತಿಸಲಾಗುವುದು.
3.ಈ ಮುಕ್ತ ಕೌನ್ಸಲಿಂಗ್ ಪ್ರಕ್ರಿಯೆಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು NTS Scholarship ಪಡೆಯಲು ಅರ್ಹರಾಗಿರುವುದಿಲ್ಲ.
4.ಈಗಾಗಲೇ KCET-2024 ಮತ್ತು CUET (ICAR)-2024 ಪ್ರವೇಶಾತಿ ಪ್ರಕ್ರಿಯೆಯಿಂದ ಆಯ್ಕೆಯಾಗಿ, ರಾಜ್ಯದ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ / ಇಂಜಿನಿಯರಿಂಗ್ / ವೈದ್ಯಕೀಯ (ಓಇಇಖಿ) ಯಾವುದೇ ಪದವಿಗಳಿಗೆ ಮತ್ತು ಓಖI ಕೋಟಾದಡಿ ರಾಜ್ಯದ ಯಾವುದೇ ರಾಜ್ಯದ ಕೃಷಿ / ತೋಟಗಾರಿಕೆ ಹಾಗೂ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಸ್ನಾತಕ ಪದವಿಗಳಿಗೆ ಪ್ರವೇಶ ಪಡೆದಿರುವ ಅಭ್ಯರ್ಥಿಗಳು ಈ ಮುಕ್ತ ಕೌನ್ಸಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ. ಆದರೆ ಅಧಿಕೃತ ಅಧಿಕಾರಿಗಳಿಂದ/ಕುಲಸಚಿವರಿಂದ ಪಡೆದ ಪ್ರವೇಶ ರದ್ದತಿ ಆದೇಶವನ್ನು ಲಗತ್ತಿಸಿದ್ದಲ್ಲಿ ಅಭ್ಯರ್ಥಿಯ ಅರ್ಜಿಯನ್ನು ಪ್ರವೇಶಾತಿ ಸಮಿತಿಯು ಪರಿಶೀಲಿಸಿದ ನಂತರ ಪರಿಗಣಿಸಲಾಗುವುದು.
5. ಈ ಮುಕ್ತ ಕೌನ್ಸಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಮತ್ತು CUET (ICAR)-2024 ಪ್ರವೇಶಾತಿ ಪ್ರಕ್ರಿಯೆಯಲ್ಲಿ ಪರಿಶೀಲಿಸಲಾಗಿದ್ದ/ಸಲ್ಲಿಸಿದ್ದ ಎಲ್ಲಾ ಮೂಲ ದಾಖಲಾತಿಗಳನ್ನು ಮತ್ತು ಮೂಲ ದಾಖಲಾತಿಗಳ ಎರಡು ಸೆಟ್ ಜೆರಾಕ್ಸ್ ಪ್ರತಿಗಳನ್ನು ಪರಿಶೀಲನೆಗೆ ತರಬೇಕಾಗಿರುತ್ತದೆ, ಇಲ್ಲವಾದಲ್ಲಿ ಅಭ್ಯರ್ಥಿಗಳು ಮುಕ್ತ ಕೌನ್ಸಲಿಂಗ್ನಲ್ಲಿ ಭಾಗವಹಿಸಲು ಅರ್ಹರಾಗಿರುವುದಿಲ್ಲ.
6.ಸದರಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳು ರೂ. 35,975/- ಪ್ರವೇಶ ಶುಲ್ಕವನ್ನು ನಗದಾಗಿ ಸ್ಥಳದಲ್ಲಿಯೇ ಕಡ್ಡಾಯವಾಗಿ ಪಾವತಿಸಬೇಕಾಗಿರುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳ: ಪೋಷಕರ ವಾರ್ಷಿಕ ವರಮಾನ ರೂ.2.5ಲಕ್ಷದೊಳಗೆ ಇದ್ದಲ್ಲಿ ಅಂತಹ ಅಭ್ಯರ್ಥಿಗಳು ಪ್ರವೇಶ ಶುಲ್ಕವನ್ನು ಪಾವತಿಸುವಂತಿಲ್ಲ, ವಾರ್ಷಿಕ ವರಮಾನ ರೂ2.5 ಲಕ್ಷದಿಂದ ರೂ.10 ಲಕ್ಷದೊಳಗಿದ್ದರೆ ಒಟ್ಟು ಪ್ರವೇಶ ಶುಲ್ಕದ ಶೇಕಡ 50ರಷ್ಟು (ರೂ.17,988) ಮೊತ್ತವನ್ನು ಮುಕ್ತ ಕೌನ್ಸಿಲಿಂಗ್ ಪ್ರವೇಶಾತಿ ಸಮಯದಲ್ಲಿ ಪಾವತಿಸಬೇಕು. ವಾರ್ಷಿಕ ವರಮಾನ ರೂ. 10 ಲಕ್ಷಕ್ಕಿಂತ ಹೆಚ್ಚಿದ್ದಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ಪೂರ್ಣ ಶುಲ್ಕವನ್ನು (ರೂ. 35,975) ಪಾವತಿಸಬೇಕು. (ಇತರೆ ಶುಲ್ಕಗಳನ್ನು ಆಯಾ ಕೃವಿವಿಗಳ ಸೂಚನೆಯಂತೆ ಅಭ್ಯರ್ಥಿಗಳು ಪಾವತಿಸತಕ್ಕದ್ದು) ಇಲ್ಲವಾದಲ್ಲಿ ಅಭ್ಯರ್ಥಿಗಳ ಸೀಟನ್ನು ರದ್ದುಗೊಳಿಸಲಾಗುವುದು
7. ಈ ಮುಕ್ತ ಕೌನ್ಸಲಿಂಗ್ನಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಈ ಮೊದಲು ರಾಜ್ಯದ ಯಾವುದೇ ಕೃಷಿ ವಿಶ್ವವಿದ್ಯಾಲಯ/ತೋಟಗಾರಿಕೆ ವಿಶ್ವವಿದ್ಯಾಲಯ ಅಥವಾ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿರುವುದಿಲ್ಲವೆಂದು ಮುಚ್ಚಳಿಕೆಯನ್ನು ನೀಡಬೇಕು.
8.ಈ ಮುಕ್ತ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಪಾವತಿಸಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸುವುದಿಲ್ಲ.
9.ಈ ಮುಕ್ತ ಕೌನ್ಸಿಲಿಂಗ್ ಮತ್ತು ಪ್ರವೇಶಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯಗಳ ಒಮ್ಮತದ ತೀರ್ಮಾನವೇ ಅಂತಿಮವಾಗಿರುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳು ಆಯಾ ವಿಶ್ವ ವಿದ್ಯಾನಿಲಯ/ ಕಾಲೇಜುಗಳಿಗೆ ದಿನಾಂಕ 06.12.2024ರ ಸಾಯಂಕಾಲ 4.00 ಘಂಟೆಯೊಳಗೆ ಕಡ್ಡಾಯವಾಗಿ ಪ್ರವೇಶಾತಿ ಪಡೆಯಬೇಕು.
Technically assisted by National Informatics Centre (NIC), Karnataka State Unit.
Technically assisted by NIC, Karnataka.